ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ

Webee Cafe
ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ

ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ

ದಿವಿಜರಿಗಾಶ್ರಯದಾತೇ, ತಾಯೇ, ಋಷಿ ಮುನಿಕುಲ ಸಂಪ್ರೀತೇ

ಭುವಿಯೊಳು ಕಾಣುವ ದೇವತೆ, ನೀನು,

ನಮಿಸುವೆ ನಿನ್ನಡಿಗೆ

ತಾಯೇ ನಮಿಸುವೆ ನಿನ್ನಡಿಗೆ

ಅನುದಿನ  ಸೇವೆಯ ಗೈವೆ,  ತಾಯೆ,         ಕರುಣದಿ ನಮ್ಮನು ಪೊರೆಯೇ 

ವಸು ಕುವರಿಯೆ, ಆದಿತ್ಯ ಸಹೋದರಿ, 

ರುದ್ರರ ಹಡೆದಿಹ ಮಾತೆ,

ನೀ, ತ್ರಿಭುವನಪೋಷಿಣಿ ಮಾತೆ


ಪಾಪ ವಿನಾಶಿನಿ  ತಾಯೇ, ಭವ ತಾಪ ನಿವಾರಿಣಿ ಕಾಯೇ

ಕಾರುಣ್ಯದ ಖನಿ  ವೈತರಣಿಯ ತಾರಿಣಿ

ಜಗಧಾರಿಣಿ  ನಮಿಪೆ,   ತಾಯೇ,ಜಗದೋದ್ಧಾರಿಣಿ ನಮಿಪೆ


ಸಕಲೌಷಧಗಳ ನಿಧಿಯೇ, ತಾಯೇ,     ರೋಗನಿವಾರಿಣಿಯೇ

ವ್ಯಾಕುಲ ಕಳೆಯುವ, ಶಾಂತಿಯನೀಯುವ

ಸೌಖ್ಯ ಪ್ರದಾಯಿನಿಯೆ,  ಅಂಬ, ಕಾಮಿತ ದಾಯಿನಿಯೇ


ಸಾಹಿತ್ಯ:-ಕೃಷ್ಣಪ್ರಸಾದ್ ಬದಿ.

Leave a reply